ಅವರೋಹಣ ತಾರತಮ್ಯ ಸಂಧಿ
26 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ನಿಜಭಕ್ತರೆನಿಸುವ ವಾರಿಜಾಸನ ಮುಖ್ಯ ನಿರ್ಜರ ತಾರತಮ್ಯವ ಪೇಳ್ವೆ ಸಂಕ್ಷೇಪದಲಿ ಗುರುಬಲದಿ|| ಕೇಶವಗೆ ನಾರಾಯಣಗೆ ಕಮಲಾಸನ ಸಮೀರರಿಗೆ ವಾಣಿಗೆ ವೀಶ ಫಣಿಪ ಮಹೇಶರಿಗೆ ಷಣ್ಮಹಿಷಿಯರ ಪದಕೆ ಶೇಷ ರುದ್ರರ ಪತ್ನಿಯರಿಗೆ ಸುವಾಸದ ಪ್ರದ್ಯುಮ್ನರಿಗೆ ಸಂತೋಷದಲಿ ವಂದಿಸುವೆ ಭಕ್ತಿ ಜ್ಞಾನ ಕೊಡಲೆಂದು||1|| ಪ್ರಾಣದೇವಗೆ ನಮಿಪೆ ಕಾಮನ ಸೂನು ಮನು ಗುರು ದಕ್ಷ ಶಚಿ ರತಿ ಮಾನಿನಿಯರಿಗೆ ಪ್ರವಹ ದೇವಗೆ ಸೂರ್ಯ ಸೋಮ ಯಮ ಮಾನವಿಗೆ ವರುಣನಿಗೆ ವೀಣಾ ಪಾಣಿ ನಾರದ ಮುನಿಗೆ ನಪಿಸುವೆ ಜ್ಞಾನ ಭಕ್ತಿ ವಿರಕ್ತಿ ಮಾರ್ಗವ ತಿಳಿಸಲಿ ಎನಗೆಂದು||2|| ಅನಳ ಭೃಗು ದಾಕ್ಷಾಯಣಿಯರಿಗೆ ಕನಕ ಗರ್ಭಜ ಸಪ್ತರ್ಷಿಗಳಿಗೆ ಎಣೆಯೆನಿಪ ವೈವಸ್ವತ ಮನು ಗಾಧಿ ಸಂಭವಗೆ ದನುಜ ನಿರ್ಋತಿ ತಾರ ಪ್ರಾವಹಿ ವನಜ ಮಿತ್ರಗೆ ಅಶ್ವಿನೀ ಗಣಪಾ ಧನಪ ವಿಶ್ವಕ್ಸೇನರಿಗೆ ವಂದಿಸುವೆನು ಅನವರತ||3|| ಉಕ್ತ ದೇವರ್ಕಳನು ಉಳಿದೆಂಭತ್ತೈದು ಜನರುಗಳು ಮನುಗಳು ಚಿಥ್ಯ ಚಾವನ ಯಮಳರಿಗೆ ಕರ್ಮಜರು ಎನಿಸುತಿಪ್ಪ ಕಾರ್ತವೀರ್ಯಾರ್ಜುನ ಪ್ರಮುಖ ಶತಸ್ಥರಿಗೆ ಪರ್ಜನ್ಯ ಗಂಗ ಆದಿತ್ಯ ಯಮ ಸೋಮ ಅನಿರುದ್ಧರ ಪತ್ನಿಯರ ಪದಕೆ||4|| ಹುತವಹನ ಅರ್ಧಾಂಗಿನಿಗೆ ಚಂದ್ರಮ ಸುತ ಬುಧಗೆ ನಾಮಾತ್ಮಿಕ ಉಷಾ ಸತಿಗೆ ಛಾಯಾತ್ಮಜ ಶನೈಶ್ಚರಗೆ ಅನಮಿಪೆ ಸತತ ಪ್ರತಿ ದಿವಸದಲಿ ಬಿಡದೆ ಜೀವ ಪ್ರತತಿ ಮಾಡುವ ಕರ್ಮಗಳಿಗೆ ಅಧಿಪತಿಯು ಎನಿಪ ಪುಷ್ಕರನ ಪಾದಾಂಬುಜಗಳಿಗೆ ನಮಿಪೆ||5|| ಆ ನಮಿಪೆ ಅಜಾನಜರಿಗೆ ಸುಕೃಶಾನು ಸುತರಿಗೆ ಗೋವ್ರಜದೊಳಿಹ ಮಾನಿನಿಯರಿಗೆ ಚಿರಪಿತರು ಶತನೂನ ಶತಕೋಟಿ ಮೌನಿ ಜನರಿಗೆ ದೇವಮಾನವ ಗಾನ ಪ್ರೌಢರಿಗೆ ಅವನಿಪರಿಗೆ ರಮಾ ನಿವಾಸನ ದಾಸವರ್ಗಕೆ ನಮಿಪೆನು ಅನವರತ||6|| ಅನುಕ್ರಮಣಿಕ ತಾರತಮ್ಯವ ಅನುದಿನದಿ ಸದ್ಭಕ್ತಿ ಪೂರ್ವಕ ನೆನೆವರಿಗೆ ಧರ್ಮಾರ್ಥ ಕಾಮಾದಿಗಳು ಫಲಿಸುವವು ವನಜ ಸಂಭವ ಮುಖ್ಯರು ಅವಯವರು ಎನಿಸುವ ಜಗನ್ನಾಥ ವಿಠಲನ ವಿನಯದಿಂದಲಿ ನಮಿಸಿ ಕೊಂಡಾಡುತಿರು ಮರೆಯದಲೆ||7||
Bannanje Govindacharya
Rs.238.00
B.N.K Sharma
Rs.1100.00
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)