ಅಣು ತಾರತಮ್ಯ ಸಂಧಿ
16 verses
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ||1|| ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ||2|| ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು ದ್ಯುಮಣಿಗಿಂದಲಿ ವರುಣ ನೀಚನು ನಾದದ ಅಧಮನು ಸುಮನಸಾಸ್ಯ ಪ್ರಸೂತಿ ಭೃಗು ಮುನಿ ಸಮರು ನಾರದಗೆ ಅಧಮರು ಅತ್ರಿ ಪ್ರಮುಖ ವಿಶ್ವಾಮಿತ್ರ ವೈವಸ್ವತರು ಅನಳಗೆ ಅಧಮ||3|| ಮಿತ್ರ ತಾರಾ ನಿರ್ಋತಿ ಪ್ರವಹಾ ಪತ್ನಿ ಪ್ರಾವಹಿ ಸಮರು ವಿಶ್ವಾಮಿತ್ರಗಿಂದಲಿ ಕೊರತೆ ವಿಷ್ವಕ್ಸೇನ ಗಣನಾಥ ವಿತ್ತಪತಿ ಅಶ್ವಿನಿಗಳು ಅಧಮರು ಮಿತ್ರ ಮೊದಲಾದ ಅವರಿಗಿಂದಲಿ ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ||4|| ಮರುತರು ಒಂಭತ್ತು ಅಧಿಕ ನಾಲ್ವತ್ತು ಎರಡು ಅಶ್ವಿನಿ ವಿಶ್ವೇದೇವರು ಎರಡೈದು ಹನ್ನೊಂದು ರುದ್ರರು ದ್ವಾದಶಾದಿತ್ಯ ಗುರು ಪಿತೃ ತ್ರಯ ಅಷ್ಟವಸುಗಳು ಭರತ ಭಾರತಿ ಪೃಥ್ವಿ ಋಭುವು ಎಂದರಿದು ಇವರನು ಸೋಮರಸ ಪಾನಾರ್ಹರು ಅಹುದೆಂದು||5|| ಈ ದಿವೌಕಸರೊಳಗೆ ಉಕ್ತರು ಐದಧಿಕ ದಶ ಉಳಿದ ಎಂಭತ್ತೈದು ಶೇಷರಿಗೆ ಎಣೆಯೆನಿಸುವರು ಧನಪ ವಿಘ್ನೇಶಾ ಸಾಧು ವೈವಸ್ವತ ಸ್ವಯಂಭುವ ಶ್ರೀದ ತಾಪಸರುಳಿದು ಮನು ಎಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು||6|| ಚವನ ನಂದನ ಕವಿ ಬೃಹಸ್ಪತಿ ಅವರಜ ಉಚಿಥ್ಯಮುನಿ ಪಾವಕ ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ ಕುವಲಯಪರು ಉಕ್ತೇತರಿಂದಲಿ ಅವರ ರೋಹಿಣಿ ಶಾಮಲಾ ಜಾಹ್ನವಿ ವಿರಾಟ್ ಪರ್ಜನ್ಯ ಸಂಜ್ಞಾ ದೇವಿಯರು ಅಧಮ||7|| ದ್ಯುನದಿಗಿಂತಲಿ ನೀಚರೆನಿಪರು ಅನಭಿಮಾನಿ ದಿವೌಕಸರು ಕೇಚನ ಮುನಿಗಳಿಗೆ ಕಡಿಮೆ ಸ್ವಾಹಾ ದೇವಿಗೆ ಅಧಮ ಬುಧ ಎನಿಸುವಳು ಉಷಾದೇವಿ ನೀಚಳು ಶನಿ ಕಡಿಮೆ ಕರ್ಮಾಧಿಪತಿ ಸದ್ವಿನುತ ಪುಷ್ಕರ ನೀಚನು ಎನಿಸುವ ಸೂರ್ಯನಂದನಗೆ||8|| ಕೊರತೆಯೆನಿಪರು ಅಶೀತಿ ಋಷಿ ಪುಷ್ಕರಗೆ ಊರ್ವಶಿ ಮುಖ್ಯ ಶತ ಅಪ್ಸರರು ತುಂಬುರ ಮುಖರು ಅಜಾನಜರು ಎನಿಸುತಿಹರು ಕರೆಸುವುದು ಅನಳಗಣ ನಾಲ್ವತ್ತು ಅರೆ ಚತುರ್ದಶ ದ್ವಿ ಅಷ್ಟ ಸಾವಿರ ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ||9|| ತದವರರು ಅನಾಖ್ಯಾತ ಅಪ್ಸರ ಸುದತಿಯರು ಕೃಷ್ಣಾoಗ ಸಂಗಿಗಳು ಅದರ ತರುವಾಯದಲಿ ಚಿರಪಿತರುಗಳು ಇವರಿಂದ ತ್ರಿದಶ ಗಂಧರ್ವ ಗಣ ಇವರಿಂದ ಅಧಮ ನರ ಗಂಧರ್ವರು ಇವರಿಂದ ಉದಧಿ ಮೇಲೆ ಅಖಿಳ ಪತಿಗಳು ಅಧಮರು ನೂರು ಗುಣದಿಂದ||10|| ಪೃಥ್ವಿ ಪತಿಗಳಿಗಿಂದ ಶತ ಮನುಜೋತ್ತಮರು ಕಡಿಮೆ ಎನಿಪರು ಇವರಿಂದ ಉತ್ತರೋತ್ತರ ನೂರು ಗುಣದಿಂದ ಅಧಿಕರಾದವರ ನಿತ್ಯದಲಿ ಚಿಂತಿಸುತ ನಮಿಸುತ ಭೃತ್ಯನು ಆನುಹದೆಂಬ ಭಕ್ತರ ಚಿತ್ತದಲಿ ನೆಲೆಗೊಂಡು ಕರುಣಿಪರು ಅಖಿಳ ಸೌಖ್ಯಗಳ||11|| ದ್ರುಮಲತಾ ತೃಣ ಗುಲ್ಮ ಜೀವರು ಕ್ರಮದಿ ನೀಚರು ಇವರಿಗಿಂತಧಮರು ನಿತ್ಯ ಬದ್ಧರಿಗಿಂತಲು ಅಜ್ಞಾನಿ ತಮಸಿಗೆ ಯೋಗ್ಯರ ಭೃತ್ಯರು ಅಧಮರು ಅಮರುಷಾದಿ ಅಭಿಮಾನಿ ದೈತ್ಯರು ನಮುಚಿ ಮೊದಲಾದ ಅವರಿಗಿಂತಲಿ ವಿಪ್ರಚಿತ ನೀಚ||12|| ಅಲಕುಮಿಯು ತಾ ನೀಚಳೆನಿಪಲು ಕಲಿ ಪರಮ ನೀಚತಮ ಅವನಿಂದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ ಮಲವಿಸರ್ಜನ ಕಾಲದಲಿ ಕತ್ತಲೆಯೊಳಗೆ ಕಲ್ಮಶ ಕುಮಾರ್ಗ ಸ್ಥಳಗಳಲಿ ಚಿಂತನೆಯ ಮಾಳ್ಪುದು ಬಲ್ಲವರು ನಿತ್ಯ||13|| ಸತ್ವ ಜೀವರ ಮಾನಿ ಬ್ರಹ್ಮನು ನಿತ್ಯ ಬದ್ಧರೊಳಗೆ ಪುರಂಜನ ದೈತ್ಯ ಸಮುದಾಯಧಿಪತಿ ಕಲಿಯೆನಿಪ ಪವಮಾನ ನಿತ್ಯದಲಿ ಅವರೊಳಗೆ ಕರ್ಮ ಪ್ರವರ್ತಕನು ತಾನಾಗಿ ಶ್ರೀ ಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ||14|| ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ ಅಧಿಕಾರ ಅನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ ಜ್ಞಾನ ಭಕ್ತಿ ಸುರರ್ಗೆ ಮಿಶ್ರ ಜ್ಞಾನ ಮಧ್ಯಮ ಜೀವರಿಗೆ ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ||15|| ದೇವ ದೈತ್ಯರ ತಾರತಮ್ಯವ ಈ ವಿಧದಿ ತಿಲಿದೆಲ್ಲರೊಳು ಲಕ್ಷ್ಮೀವರನು ಸರ್ವೋತ್ತಮನೆಂದರಿದು ನಿತ್ಯದಲಿ ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ ಶ್ರೀ ವಿರಿಂಚಾದಿ ಅಮರ ವಂದಿತ ಜಗನ್ನಾಥ ವಿಠಲನು||16||

Bannanje Govindacharya
Rs.238.00

B.N.K Sharma
Rs.1100.00

B.N.K Sharma
Rs.1445.00
*As an Amazon Associate, we earn from qualifying purchases
Advertisement
Banner Ad Space (728x90)